ನಮಗೆ ನಮ್ಮ ಬಾಲ್ಯದಲ್ಲಿ ಯಾಕೆಲ್ಲ ಪೆಟ್ಟು ಬಿದ್ದಿರಬಹುದು!!??

Post Reply
ajaysimha
Posts: 832
Joined: 19 Apr 2018, 18:16

ನಮಗೆ ನಮ್ಮ ಬಾಲ್ಯದಲ್ಲಿ ಯಾಕೆಲ್ಲ ಪೆಟ್ಟು ಬಿದ್ದಿರಬಹುದು!!??

Post by ajaysimha »

ನಮಗೆ ನಮ್ಮ ಬಾಲ್ಯದಲ್ಲಿ ಯಾಕೆಲ್ಲ ಪೆಟ್ಟು ಬಿದ್ದಿರಬಹುದು!!??

೧. ಪೆಟ್ಟು ತಿಂದು ಅತ್ತಿದ್ದಕ್ಕೆ.🙂
೨. ಪೆಟ್ಟು ತಿಂದು ಅಳದಿದ್ದಕ್ಕೆ.🤔
೩. ಪೆಟ್ಟು ಬೇಳುವ ಮುಂಚೆ ಅತ್ತಿದ್ದಕ್ಕೆ.😜
೪. ಹಿರಿಯರು ಕುಳಿತಿದ್ದಲ್ಲಿ ನಿಂತಿದ್ದಕ್ಕೆ.😔
೫. ಹಿರಿಯರು ನಿಂತಿದ್ದಾಗ ಕುಳಿತಿದ್ದಕ್ಕೆ. 😯
೬. ಹಿರಿಯರು ಕುಳಿತಿದ್ದಲ್ಲಿ ವಿನಾಕಾರಣ ಸುಳಿದಾಡಿದ್ದಕ್ಕೆ.😀
೭. ಅತಿಥಿಗಳಿಗಾಗಿ ಸಿದ್ಧಪಡಿಸಿದ್ದ ತಿಂಡಿ ತಿಂದದ್ದಕ್ಕೆ.😋
೮. ಕೊಟ್ಟ ತಿಂಡಿ ತಿನ್ನದಿದ್ದಕ್ಕೆ.😒
೯. ಸೂರ್ಯಾಸ್ತದ ನಂತರ ಮನೆಗೆ ಬಂದದ್ದಕ್ಕೆ.😃
೧೦. ಮಂಕಾಗಿ ಕುಳಿತಿದ್ದಕ್ಕೆ.😔
೧೧. ಸಿಕ್ಕಾಬಟ್ಟೆ ಉತ್ಸಾಹ ತೋರಿದ್ದಕ್ಕೆ.🤪
೧೨. ಯಾರಿಂದಾದರೂ ಹೊಡೆತ ತಿಂದು ಬಂದರೆ.😫
೧೩. ಯಾರಿಗಾದರೂ ಹೊಡೆದು ಬಂದರೆ.☹️
೧೪. ನಿಧಾನವಾಗಿ ಊಟ ಮಾಡಿದರೆ.😕
೧೫. ಗಬಗಬನೆ ಊಟ ಮಾಡಿದರೆ.😩
೧೬. ಪೂರ್ತಿ ಊಟ ಮಾಡದಿದ್ದರೆ. 😑
೧೭. ನಡೆಯುವಾಗ ಎಡವಿ ಬಿದ್ದರೆ.🤥
೧೮. ಆಡುವಾಗ ಗಾಯ ಮಾಡಿಕೊಂಡರೆ.
೧೯. ಹಿರಿಯರನ್ನು ದೃಷ್ಠಿಸಿ ನೋಡಿದರೆ.🙄
೨೦. ಹಿರಿಯರು ಮಾತನಾಡುವಾಗ ಅವರತ್ತ ಪಿಳಿಪಿಳಿ ನೋಡಿದರೆ.😵
೨೧. ಹಿರಿಯರು ಮಾತನಾಡುವಾಗ ಅವರತ್ತ ಕಣ್ಣು ಮಿಟುಕಿಸದೇ ನೋಡಿದರೆ.🥴
೨೨. ಯಾರತ್ತಲಾದರೂ ವಾರೆಗಣ್ಣಿನಲಿ ನೋಡಿದರೆ.😯
೨೩. ಆಟವಾಡಲು ಜೊತೆಗಾರರೊಡನೆ ಸೇರಿಕೊಂಡರೆ.🤗
೨೪. ಆಟವಾಡಲು ಜೊತೆಗಾರರೊಡನೆ ಸೇರಿಕೊಳ್ಳದಿದ್ದರೆ.🤔
೨೫. ಊಟ ಮಾಡಿ ತಟ್ಟೆ-ಲೋಟ ತೊಳೆದಿಡದಿದ್ದರೆ.😦
೨೬. ತಟ್ಟೆ-ಲೋಟವನ್ನು ಸರಿಯಾಗಿ ತೊಳೆದಿಡದಿದ್ದರೆ.😧
೨೭. ತಟ್ಟೆ-ಲೋಟವನ್ನು ಬೀಳಿಸಿದರೆ.
೨೮. ಉಗುರು ಕಚ್ಚಿದರೆ.🤭
೨೯. ಸ್ನಾನ ಮಾಡದಿದ್ದರೆ.😓
೩೦. ಅತಿಬೇಗ ಸ್ನಾನ ಮಾಡಿದರೆ.😥
೩೧. ಶಾಲೆಯಲಿ ಪೆಟ್ಟು ತಿಂದರೆ. 😣
೩೨. ಗುದ್ದಲಿದ್ದ ವಾಹನದಿಂದ ತಪ್ಪಸಿಕೊಂಡಿದ್ದರೆ!!!😛
೩೩. ವಾಹನದಿಂದ ಗುದ್ದಿಸಿಕೊಂಡರೆ!!!😳
೩೪. ಪ್ರಶ್ನಿಸಿದಾಗ ಉತ್ತರಿಸದಿದ್ದರೆ.
೩೫. ಪ್ರಶ್ನಿಸಿದಾಗ ತಿರುಗಿ ಉತ್ತರಿಸಿದರೆ.☹️
೩೬. ಪ್ರಾರ್ಥನೆಗೆ ಬಾರದಿದ್ದರೆ.😌

ನಾನು ನಾವಾಗಿದ್ದು ಹೀಗೆ.
😀😀😀😀😀


Post Reply