** dharaNige doreyendu. rAga: shankarAbharaNa. tripuTa tALa ** \\ This is a composition describing [[dashAvatAra]] \\ ** pallavi: ** \\ dharaNige doreyendu nambide intha \\ parama lObhiyembudariye shrI hariye \\ ** charaNas: ** \\ kADi bEDuvarige koDalArade anji \\ Odi nIroLu sErikoNDe bEga \\ hEDiya teradali mOreya tOrade \\ Odi araNyadi mrgagaLa sEride \\ \\ baDavara binnaha lAlisade halla \\ kaDukOpadali teradanjiside \\ taDeyade bhikSukaanAdaru biDarendu \\ koDaliya piDidu kODaga hiNDa kAide \\ \\ uttamanendare matte cOranAde \\ battale ninte tEjiyaEride \\ etta hOdaru biDe matte ninnanu dEva \\ cittaja janaka shrI purandara viTTala \\ === ಧರಣಿಗೆ ದೊರೆಯೆಂದು. ರಾಗ: ಶಂಕರಾಭರಣ. ತ್ರಿಪುಟ ತಾಳ === ==ಪಲ್ಲವಿ: == ಧರಣಿಗೆ ದೊರೆಯೆಂದು ನಂಬಿದೆ ಇಂಥ \\ ಪರಮ ಲೋಭಿಯೆಂಬುದರಿಯೆ ಶ್ರೀ ಹರಿಯೆ \\ \\ ==ಚರಣ:== \\ ಕಾಡಿ ಬೇಡುವರಿಗೆ ಕೊಡಲಾರದೆ ಅಂಜಿ \\ ಓಡಿ ನೀರೊಳು ಸೇರಿಕೊಂಡೆ ಬೇಗ \\ ಹೇಡಿಯ ತೆರದಲಿ ಮೋರೆಯ ತೋರದೆ\\ ಓಡಿ ಅರಣ್ಯದಿ ಮೃಗಗಳ ಸೇರಿದೆ \\ \\ ಬಡವರ ಬಿನ್ನಹ ಲಾಲಿಸದೆ ಹಲ್ಲ \\ ಕಡುಕೋಪದಲಿ ತೆರೆದಂಜಿಸಿದೆ \\ ತಡೆಯದೆ ಭಿಕ್ಷುಕನಾದರು ಬಿಡರೆಂದು \\ ಕೊಡಲಿಯ ಪಿಡಿದು ಕೋಡಗ ಹಿಂಡ ಕಾಯ್ದೆ \\ ಉತ್ತಮನೆಂದರೆ ಮತ್ತೆ ಚೋರನಾದೆ \\ ಬತ್ತಲೆ ನಿಂತೆ ತೇಜಿಯನೇರಿದೆ \\ ಎತ್ತ ಹೋದರು ಬಿಡೆ ಮತ್ತೆ ನಿನ್ನನು ದೇವ \\ ಚಿತ್ತಜ ಜನಕ ಶ್ರೀ ಪುರಂದರ ವಿಟ್ಠಲ \\ ** Meaning ** \\ //__pallavi__// \\__ //_charaNas_// \\