ಗಾದೆ ಗೌರಜ್ಜಿ ಜೊತೆ ಒಂದು ಸಂಭಾಷಣೆ

Post Reply
ajaysimha
Posts: 831
Joined: 19 Apr 2018, 18:16

ಗಾದೆ ಗೌರಜ್ಜಿ ಜೊತೆ ಒಂದು ಸಂಭಾಷಣೆ

Post by ajaysimha »

*ಹಿಂದಿನವರು ಸಂಭಾಷಣೆಯಲ್ಲಿ ಮಾತುಮಾತಿಗೂ ಗಾದೆಗಳನ್ನು ಸೇರಿಸುತ್ತಿದ್ದರು...*

ಈಗಿನವರಿಗೆ ಆ ರೂಢಿ ತಪ್ಪಿದೆ...(ಮಾತೇ ಅಪರೂಪ...ಗಾದೆಗಳಿಗೆ ಹೋದ್ರಿ...😅)

*****

*😛 ಗಾದೆ ಗೌರಜ್ಜಿ ಜೊತೆ ಒಂದು ಸಂಭಾಷಣೆ. 😛*

" ಏನಜ್ಜೀ, ಚೆನ್ನಾಗಿದೀರಾ?"

"ಏನೋ ಹೀಗಿದೀನಿ ನೋಡಪ್ಪಾ- ಊರು ಹೋಗು ಅನ್ನುತ್ತೆ, ಕಾಡು ಬಾ ಅನ್ನುತ್ತೆ "

"ಯಾಕಜ್ಜೀ ಹಾಗಂತೀರಾ?:"

"ಮತ್ತಿನ್ನೇನಪ್ಪಾ? ನನ್ನಂಥೋರು ಇನ್ನೆಷ್ಟು ಕಾಲ ಬದುಕಿರ್ಬೇಕು? ಊರಿಗೆ ಆಳಲ್ಲ- ಸ್ಮಶಾನಕ್ಕೆ ಹೆಣ ಅಲ್ಲ. "

" ಬಿಡ್ತು ಅನ್ನಿ ಅಜ್ಜಿ, ನಿಮ್ಮಂಥೋರು ಇರ್ಬೇಕು ಮನೇಲಿ. ಚಿಕ್ಕೋರು ತಪ್ಪು ಮಾಡದ ಹಾಗೆ ನೋಡ್ಕೊಳ್ಳಕ್ಕೆ, ತಿದ್ದಿ ಬುದ್ಧಿ ಹೇಳೋಕೆ. "

"ಅದೇನೋ ನಿಜಾನಪ್ಪ - ಮನೆಗೊಂದು ಮುದಿ ಮೊರಡು, ಒಲೆಗೊಂದು ಕೊದೆ ಕೊರಡು ಅಂತಾರಲ್ಲ. ಆದ್ರೂ ಈಗಿನವು ನನ್ನ ಮಾತೆಲ್ಲಿ ಕೇಳ್ತಾವೆ? ಏತಿ ಅಂದ್ರೆ ಪ್ರೇತಿ ಅಂತಾವೆ. "

" ಅಂದ ಹಾಗೆ.... ಎಲ್ಲಿ ನಿಮ್ಮ ಮೊಮ್ಮಕ್ಳು? ಕಾಣ್ತಾ ಇಲ್ಲ. "
" ಅವೇನು ಬೆಲ್ಲ ಜಜ್ಜಿದ ಕಲ್ಲೇ, ಒಂದೇ ಕಡೆ ಕೂತಿರಕ್ಕೆ? ಕಾಲಿಗೆ ಚಕ್ರ ಕಟ್ಕೊಂಡೋರಂಗೆ ಓಡಾಡ್ತಿರ್ತವೆ. "

" ಅದ್ಸರಿ, ಹೋದ್ವಾರ ನಾ ಬಂದಾಗ ನೀವಿರ್ಲಿಲ್ವಲ್ಲಾ... ಎಲ್ಲೋಗಿದ್ರಿ?"

"ಮಗ್ಳ ಮನೇಗೆ ಹೋಗಿದ್ನಪ್ಪಾ.... ಅವ್ಳಿಗೆ ಹುಶಾರಿರ್ಲಿಲ್ಲ. "

" ಮತ್ತೇ... ಆವತ್ತು ಮಗಳೇನೋ ಅಂದ್ಳೂಂತ ಇನ್ನಲ್ಲಿಗೆ ಕಾಲಿಡಲ್ಲ ಅಂದಿದ್ರಿ?"

" ಅಂದಿದ್ದೆ; ಆದ್ರೂ ಮನಸ್ಸು ಕೇಳ್ಬೇಕಲ್ಲ? ಅಂಗಾಲಿಗೆ ಹೇಸಿಗೆ ಇಲ್ಲ, ಕರುಳಿಗೆ ನಾಚಿಕೆ ಇಲ್ಲ ನೋಡು. "

" ಅಜ್ಜೀ.. ಆ ರಾಮಣ್ಣನ ಮಗ್ಳು ಕಾಲೇಜಲ್ಲಿ ಏನೋ ಗಲಾಟೆ ಮಾಡ್ಕೊಂಡ್ಳಂತೆ??"

" ಸುಮ್ನಿರಪ್ಪಾ.. ಮಾಡಿದೋರ ಪಾಪ ಆಡಿದೋರ ಬಾಯಲ್ಲೀಂತ; ನಮಗ್ಯಾಕೆ ಬಿಡು. "

" ರಾಮಣ್ಣ ಈಗ ಮಗಳ್ನ ಕಾಲೇಜಿಗೂ ಕಳಿಸಲ್ವಂತೆ?"

" ಊರು ಸೂರೆ ಹೋದ್ಮೇಲೆ ಕೋಟೆ ಬಾಗ್ಲು ಹಾಕಿದ್ರಂತೆ. ಅದಿರ್ಲಿ, ನಿನ್ಮಗ ಏನ್ಮಾಡ್ತಿದಾನೆ?"

" ಅವ್ನಿಗೇನಜ್ಜೀ.. ಚೆನ್ನಾಗಿ ತಿಂದುಂಡು ಗೂಳಿ ತರ ಇದಾನೆ. "

" ಬಿಡ್ತು ಅನ್ನೋ... ಮಗ ಉಂಡ್ರೆ ಕೇಡಲ್ಲ , ಮಳೆ ಬಂದ್ರೆ ಕೇಡಲ್ಲ. "

" ಆದ್ರೆ ಅವ್ನು ತಿನ್ನೋದ್ರಲ್ಲಿ ಮಾತ್ರ ಮುಂದೆ, ಓದೋದ್ರಲ್ಲಿ ಹಿಂದೆ. ಪ್ರಪಂಚ ಜ್ಞಾನ ಮಾತ್ರ ಚೆನ್ನಾಗಿದೆ. "

" ಸರಿ ಬಿಡು, ಓದು ಒಕ್ಕಾಲು, ಬುದ್ಧಿ ಮುಕ್ಕಾಲು ಅಂತ. ಹೇಗಾದ್ರೂ ಬದುಕ್ಕೋತಾನೆ. "

" ನಿಮ್ ತಮ್ಮನ ಮನೆಯವ್ರು ಹೇಗಿದಾರಜ್ಜಿ?"

" ಹೇಗಿರ್ತಾರೆ? ಎಲ್ಲಿದ್ದೀಯೋ ಬಸವಾ ಅಂದ್ರೆ ನೀನು ನಿಲ್ಸಿದಲ್ಲೇ ಅಂತ; ಆರಕ್ಕೇರ್ಲಿಲ್ಲ, ಮೂರಕ್ಕಿಳೀಲಿಲ್ಲ. ಸಂಸಾರ ನಡೀತಿದೆ. "

" ಸರಿ ಅಜ್ಜಿ, ಬರ್ತೀನಿ. ಬಹುಶಃ ಮುಂದಿನ ವಾರ ಬರಕ್ಕಾಗಲ್ಲ ಅನ್ಸತ್ತೆ. "

" ನಂಗೊತ್ತಿಲ್ವೇ ನಿನ್ನ? ಬಂದೇ ಬರ್ತೀಯ......... ಬಂದೆ ಗವಾಕ್ಷೀಲೀಂತ.

🤣...ಅಜ್ಜಿ ಮಾತಲ್ಲಿ ನಮ್ಮ ಗಾದೆಗಳ ಕಡು ಸತ್ಯ ಅರಿವಿವಾಯಿತೆ..

Sachi_R
Posts: 2174
Joined: 31 Jan 2017, 20:20

Re: ಗಾದೆ ಗೌರಜ್ಜಿ ಜೊತೆ ಒಂದು ಸಂಭಾಷಣೆ

Post by Sachi_R »

For those who skipped learning Kannada, this is a list of proverbs kn Kannada.

I am. giving a translation for one of them:

" ನಿಮ್ ತಮ್ಮನ ಮನೆಯವ್ರು ಹೇಗಿದಾರಜ್ಜಿ?"

"Grandma, how are the people faring in your younger brother's house?"


" ಹೇಗಿರ್ತಾರೆ? ಎಲ್ಲಿದ್ದೀಯೋ ಬಸವಾ ಅಂದ್ರೆ ನೀನು ನಿಲ್ಸಿದಲ್ಲೇ ಅಂತ; ಆರಕ್ಕೇರ್ಲಿಲ್ಲ, ಮೂರಕ್ಕಿಳೀಲಿಲ್ಲ. ಸಂಸಾರ ನಡೀತಿದೆ.

" What do you expect? It's like asking a street bull/bullock where have you been... he will tell you he is standing exactly where you left him.
The family is running. Never going up to six never dropping to three (ie no big ups or downs)"

Sachi_R
Posts: 2174
Joined: 31 Jan 2017, 20:20

Re: ಗಾದೆ ಗೌರಜ್ಜಿ ಜೊತೆ ಒಂದು ಸಂಭಾಷಣೆ

Post by Sachi_R »

Translations (as desired by a close friend here)

In olden times people employed proverbs in everything they said.

People nowadays have lost that. (Why, even conversations are becoming rare!) 

Here is a conversation with Proverb Grandma Gauri:

Hello Grandma, are you doing well? 

- Well you can see I am somehow managing. "The city says go, the forest says come." (means the end of life). 

Why do you say that, grandma? 
- What else? How long should oldies like me go on? "Useless in the city, not quite dead for the crematorium". 

Please negate those ill-sentiments, grandma. People like you should be there to make sure youngsters behave properly and correct them and give them advice. 

- That's true son, "There should be a raspy old tongue at home, and a stout forked stick for the fireplace" as they say.  But who listens to us? "Eti andre preti antaare" (talking back irreverently and thoughtlessly) 

By the way where are your grandchildren? Not to be seen here? 

- Are they "the stone kept to pound jaggery" to be always found in one place?  They go about "as if with wheels tied to their feet". 

That's right! By the way where were you last week when I had come here? 

- Had gone to my daughter's. She was not well. 

But grandma you had had said that she had spoken something and you would never visit her again? 

- Yes, I had said so. But the mind won't listen. "The feet aren't ashamed of stepping on crap, the gut won't be ashamed of sentiment". 

Grandma, is it true that Ramanna's daughter got into something at college? 

- Keep quiet. "The bad karma of someone's deed sticks to the one who gossips about it." It's none of our business. 

But Ramanna has decided not to send her to college I heard? 

-"They bolted the city gate for safety after all the roofs over the city had been blown off". Anyway what is your son doing? 

What does he lack grandma? "He eats and lazes around like the bull". 

-Negate that word! "If son eats no harm, if it rains no harm". 

But he is always first in eating but last in studies. Anyway he is streetsmart. 

-That's fine then. "Studies are only a quarter, smartness is three quarters." He will manage. 

How are the folk in your brother's place, grandma? 

-" What do you expect? It's like " asking a street bull/bullock where have you been... he will tell you he is standing exactly where you left him."
The family is running. "Never going up to six never dropping to three" (ie no big ups or downs)"

OK then grandma, I will get going. I may not be able to see you next week. 

-Don't I know you? Surely you will come..." I will come in through the window (if the door is locked) " (said about someone who is trouble). 

ajaysimha
Posts: 831
Joined: 19 Apr 2018, 18:16

Re: ಗಾದೆ ಗೌರಜ್ಜಿ ಜೊತೆ ಒಂದು ಸಂಭಾಷಣೆ

Post by ajaysimha »

Thanks @Sachi_R ji for translations

Post Reply