ಅಮ್ಮನ ಸೆರಗು

Post Reply
ajaysimha
Posts: 812
Joined: 19 Apr 2018, 18:16
x 7
x 5

#1 ಅಮ್ಮನ ಸೆರಗು

Post by ajaysimha »

Image

*ಅಮ್ಮನ ಸೆರಗು*🙏

*ಇಂದಿನ ಮಕ್ಕಳಿಗೆ ಸೆರಗು ಎಂದರೇನು ಅಂತಲೇ ಗೊತ್ತಿಲ್ಲ.ಎಕೆಂದರೆ ಅಮ್ಮ ಸೀರೆ ಉಡುವುದೇ ಅಪರೂಪ*. 🥱
*ಅಂದು ಮಗು ಅತ್ತರೆ ಕಂಬನಿ ಒರೆಸಲು ಅಮ್ಮನ ಸೆರಗೇ ಟವೆಲ್*.
*ಅಂದು ಆಟವಾಡಿ ಬಂದಾಗ ಬೆವೆತ ಮುಖ ಒರೆಸಲು ಅಮ್ಮನ ಸೆರಗೇ ಕರವಸ್ತ್ರ*.
*ಅಂದು ಮಗು ಅಮ್ಮನ ತೊಡೆಯ ಮೇಲೆ ಮಲಗಿ ನಿದ್ದೆ ಮಾಡಿದರೆ ಆ ಸೆರಗೇ ಬೀಸಣಿಗೆ,ಚಳಿಯಾದರೆ ಹೊದಿಕೆ*.🪁
*ಅಂದು ಯಾರಾದರೂ ಹೊಸಬರು ಮನೆಗೆ ಬಂದರೆ ನಾಚುವ ಮಗುವಿಗೆ ಅಮ್ಮನ ಸೆರಗೇ ಬಚ್ಚಿಟ್ಟುಕೊಳ್ಳಲು ಆಸರೆ. ಸೆರಗು ಮರೆಯಿಂದಲೇ ಕದ್ದು 😂ನೋಡಬಹುದಾಗಿತ್ತು*. 😀
*ಅಮ್ಮನ ಸೆರಗು ಹಿಡಿದುಬಿಟ್ಟರೆ ಅಮ್ಮನ ಹಿಂದೆ ನಡೆದುಕೊಂಡು ಜಗವನ್ನೇ ಸುತ್ತಿದ ಅನುಭವವಾಗುತ್ತಿತ್ತು. 👌*
*ಮಳೆ ಬಂದರೆ ನೆನೆಯುವ ಸ್ಥಿತಿ ಬಂದು ತಾನು ನೆಂದರೂ ಪರವಾಗಿಲ್ಲ, ಮಗುವಿಗೆ ಸೆರಗಿನ ಆಸರೆ ಅಂತೂ ಖಂಡಿತ*.
*ಹಣೆಯ ಬೆವರು,ನೆಂದ ಒದ್ದೆ ತಲೆ ಒರೆಸಲು ಅಮ್ಮನ ಸೆರಗು ಸದಾ ಸಿದ್ದ*. 🙏
*ಬಚ್ಚಿಟ್ಟ ತಿಂಡಿಗಳನ್ನು ಮುಚ್ಚಿಟ್ಟು ಕೊಡಲು ಅಮ್ಮನ ಸೆರಗು ಯೋಗ್ಯ ಜಾಗ*.
*ತರಕಾರಿ ತರಲು ಚೀಲ ಮರೆತಾಗ ಸೆರಗೇ ಚೀಲ*.😄
*ಗಿಡದಿಂದ ಬಿಡಿಸುವ ಹೂವುಗಳಿಗೆ ಒಮ್ಮೊಮ್ಮೆ ಸೆರಗೇ ಹೂ ಬುಟ್ಟಿ*.💐
*ಮನೆಗೆ ಯಾರಾದರೂ ಒಮ್ಮೆಲೇ ಬಂದಾಗ ಕುಳಿತು ಕೊಳ್ಳುವ ಆಸನ ಒರೆಸಲು ಸೆರಗೇ ‌ಸಾಧನ* .👏
*ಅಡುಗೆ ಮನೆಯಲ್ಲಿ ತಕ್ಷಣ ಮಸಿ ಅರಿವೆ ಸಿಗದಿದ್ದರೆ ಒಲೆ ಮೇಲೆ ಉಕ್ಕುವ ಹಾಲಿನ ಬಿಸಿ ಪಾತ್ರೆ ಇಳಿಸಲಿಕ್ಕೂಅಮ್ಮನ ಸೆರಗೇ ಬೇಕು*.👈
*ಅಂದು ಅಮ್ಮ ತಲೆಯ ಮೇಲೆ ಕಟ್ಟಿಗೆಯ , ಹುಲ್ಲಿನ ಹೊರೆ ಹೊರಲು ಅಮ್ಮನ ಸೆರಗೇ ಬಳಸುತ್ತಿದ್ದಳು*. 👌
*ಅಮ್ಮ ಮಂಗಳ ಕಾರ್ಯಗಳಲ್ಲಿ ಕೊಡುವ ಉಡಿಯಕ್ಕಿ, ಬಾಗಿಣ ಇತ್ಯಾದಿ ಸ್ವೀಕರಿಸಲು, ದೇವಸ್ಥಾನದಲ್ಲಿ ಕೊಡುವ ಪ್ರಸಾದ ಸ್ವೀಕರಿಸಲು ಅಮ್ಮ ಸೆರಗು ಬಳಸುತ್ತಿದ್ದಳು*.🔱
*ಸಿಟ್ಟು ಬಂದರೆ ಏನಾದರೂ ಮಾಡಲೇ ಬೇಕೆನ್ನುವ ಛಲ ಬಂತೋ ಅಮ್ಮ ಸೆರಗು ಎಳೆದು ಸೊಂಟಕ್ಕೆ ಎಳೆದು ಕಟ್ಟಿದಳೆಂದರೆ ಕೆಲಸ ಆದಂತೆಯೇ*💐
*ಕಣ್ಣು ಬಿಟ್ಟು ಸೆರಗು ಸೊಂಟಕ್ಕೆ ಕಟ್ಟಿದಳೆಂದರೆ ಅಪ್ಪನೇ ಒಮ್ಮೊಮ್ಮೆ ಹೆದರುತ್ತಿದ್ದ*.☂️
*ಹಬ್ಬ-ಹರಿದಿನಗಳಲ್ಲಿ ಅಮ್ಮ ಸೊಂಟಕ್ಕೆ ಸೆರಗು ಕಟ್ಟಿದಳೆಂದರೆ ಮನೆ ಸ್ವಚ್ಛಗೊಳಿಸಲು ಮುಗಿಸಿದಾಗಲೇ ಸೊಂಟದಿಂದ ಸೆರಗಿಗೆ ಮುಕ್ತಿ*.
*ಅಂದು ಮಗುವಿಗೆ ಏನಾದರೂ ನೆಗಡಿಯಾಗಿ ಮೂಗಿನಲ್ಲಿ ಸಿಂಬಳ ಸೋರಲು ಸುರು ವಾಯಿತೋ ಅಮ್ಮನ ಸೆರಗೇ ಕರವಸ್ತ್ರ*.😣
*ಅಮ್ಮನೇನಾದರೂ ಸೆರಗೊಡ್ಡಿ ಬೇಡಿದಳೆಂದರೆ ಎಂತಹ ಕಲ್ಲು ಮನಸ್ಸು ಸಹ ಕರಗುತ್ತದೆ*🙏
*ಸದಾ ಹೆಂಡತಿಯ ಸೆರಗನ್ನು ಹಿಡಿದು ಹಿಂದೆ ಓಡಾಡುತ್ತಿದ್ದ ಅಂದಿನ ಅಮ್ಮಾವ್ರ ಗಂಡಂದಿರೂ ಈಗೀಗ ಕಾಣುತ್ತಲೇ ಇಲ್ಲ*. 🤪
*ಅಮ್ಮ ಮತ್ತು ಅವಳ ಸೀರೆಯ ಸೆರಗಿನ ಸೊಬಗನ್ನು ಎಷ್ಟು ವರ್ಣಿ‌ಸಿದರೂ ಸಾಲದು.ಇಂತಹ ಮಹಿಮೆ ಉಳ್ಳ ಸೆರಗು ಈಗ ಎಲ್ಲಿ ಮಾಯವಾಯಿತೊ*?.😭
*ಈಗೀಗ ಸೀರೆ ಉಡುವವರು ಕಡಿಮೆಯಾಗಿ ಸೆರಗೇ ಇಲ್ಲದಿದ್ದ ಮೇಲೆ ಇನ್ನು ಅದನ್ನು ಹಿಡಿದು ಸಂಭ್ರಮಿಸುವ ಮಗುವೆಲ್ಲಿ.??? ಗಂಡನೆಲ್ಲಿ*.!!!😀

aaaaabbbbb
Posts: 2182
Joined: 31 Jan 2010, 14:19
x 17

#2 Re: ಅಮ್ಮನ ಸೆರಗು

Post by aaaaabbbbb »

So nostalgic

Kids will never know what they missed.

arasi
Posts: 16675
Joined: 22 Jun 2006, 09:30
x 686
x 104

#3 Re: ಅಮ್ಮನ ಸೆರಗು

Post by arasi »

aaaaabbbbb,
Ajayasimhanavara kavana encloses ammamma, eshTu janara sentimentu!

Sachi_R
Posts: 2102
Joined: 31 Jan 2017, 20:20
x 60
x 70

#4 Re: ಅಮ್ಮನ ಸೆರಗು

Post by Sachi_R »

Ajay,

Important: is this your writing?
If yes, man, you're brilliant.
ಕಾವ್ಯಪ್ರತಿಭೆಯ ಕಂತು,
ಯೋಚನೆಯ ಓಟೆಂತು!
ಅಜಯಪ್ರತಿಭೆಯ ಈ
ಅತಿರಸದ ಔತಣವೇ!
🙏

ajaysimha
Posts: 812
Joined: 19 Apr 2018, 18:16
x 7
x 5

#5 Re: ಅಮ್ಮನ ಸೆರಗು

Post by ajaysimha »

Sorry, I should have mentioned the credits to this article as whatsapp.

But if kannada bandhus wish, I will share a few articles that my mother and myself wrote together.

Post Reply