ವಿವಾಹ ಸಮಾರಂಭ

Post Reply
ajaysimha
Posts: 832
Joined: 19 Apr 2018, 18:16

ವಿವಾಹ ಸಮಾರಂಭ

Post by ajaysimha »

#ವಿವಾಹ ಸಮಾರಂಭ ನಡೆಯುತ್ತಿತ್ತು. ಪುರೋಹಿತರು ವೇದಿಕೆಯ ಮೇಲೆ ನಿಂತು ಹೇಳಿದರು :- ಈ ಮದುವೆಗೆ ಯಾರಾದರೂ ಆಕ್ಷೇಪಣೆ ಹೊಂದಿದ್ದರೆ, ತಕ್ಷಣ ಮುಂದೆ ಬನ್ನಿ. ಆಮೇಲೆ ಮದುವೆಯಾದ ನಂತರ ಗಂಡ ಹೆಂಡತಿ ನಡುವೆ ಜಗಳ ಬೇಡ.. ಈಗೀನ ಆಧುನಿಕ ಕಾಲದಲ್ಲಿ ಸಣ್ಣಪುಟ್ಟ ವಿಷಯಗಳಿಗೂ ಡೈವೋರ್ಸ್ ಆಗುತ್ತವೆ.. ಆಗ ಇಬ್ಬರ ಜೀವನವೂ ಹಾಳು.. ಯಾರಾದರೂ ಏನಾದರು ಹೇಳುವುದಿದ್ದರೆ ಮುಂದೆ ಬಂದು, ಈ ಮದುವೆಗೆ ಏನಾದರೂ ತಕಾರಾರು ಇದ್ದರೆ ಹೇಳಿ.." ಎಂದು ಹೇಳಿ ಸುಮ್ಮನಾದರು.

ಆಗ ಕಿಕ್ಕಿರಿದು ತುಂಬಿದ್ದ ಮದುವೆ ಮಂಟಪದಲ್ಲಿ ಹಿಂದೆ ನಿಂತಿದ್ದ ಸುಂದರ ಯುವತಿಯೊರ್ವಳು ತನ್ನ ಮಡಿಲಲ್ಲಿ ಒಂದು ಮಗುವಿನೊಂದಿಗೆ ಮುಂದೆ ಬಂದಳು ..!!
ಆಗ ಎಲ್ಲರೂ ಒಬ್ಬರನ್ನೊಬ್ಬರು ಮುಖ ಮುಖ ನೋಡಿಕೊಂಡರು, ಗುಸುಗುಸು ಪಿಸುಪಿಸು ಶುರುವಾಯ್ತು.. ಎಲ್ಲರ ಸಂಶಯ ನೋಟ ವರನ ಮೇಲೆ ಬಿತ್ತು..
ಗುಂಪಿನಲ್ಲಿ ಕೆಲವರು ನಗಲು ಪ್ರಾರಂಭಿಸಿದರು.. ವೇದಿಕೆಯ ಮೇಲೆ ನಿಂತಿದ್ದ ವಧು ವರನಿಗೆ ಸಿಟ್ಟಿನಿಂದ ಕಪಾಳಮೋಕ್ಷ ಮಾಡಿದಳು .. ವಧುವಿನ ತಂದೆ ಬಂದೂಕು ತರಲು ಓಡಿಹೋದರು .... ವಧುವಿನ ಸಹೋದರರು ವರನನ್ನು ಹಿಡಿದು ಹಿಗ್ಗಾಮುಗ್ಗ ತದುಕಿದರು.... ಇವೆಲ್ಲವನ್ನೂ ನೋಡಿ ವಧುವಿನ ತಾಯಿ ಪ್ರಜ್ಞೆ ತಪ್ಪಿ ಬಿದ್ದು ಬಿಟ್ಟರು..!!
ಇಡೀ ಮದುವೆ ಮಂಟಪದಲ್ಲಿ ಭೀಕರ ಮೌನ, ಭಯ, ಆತಂಕ ಮೂಡಿತು......

ಆ ಸಮಯದಲ್ಲಿ ಪುರೋಹಿತರು ಆ ಯುವತಿಯನ್ನು ಕೇಳಿದರು : "ಹೇಳು ತಾಯಿ ಈ ಮದುವೆಯಿಂದ ನಿನಗೆ ಏನು ಸಮಸ್ಯೆ ಇದೆ..!?"

ಆಗ ಆ ಯುವತಿ ಹೇಳಿದಳು : ಸ್ವಾಮಿ.... ನಿಮ್ಮ ಮಾತು ಹಿಂದೆ ನಿಂತಿದ್ದ ನನಗೆ ಸರಿಯಾಗಿ ಕೇಳುತ್ತಿಲ್ಲ .. ಅದಕ್ಕಾಗಿಯೇ ನಾನು ಮುಂದೆ ಬಂದಿದ್ದೇನೆ!!"

🎭

Sachi_R
Posts: 2174
Joined: 31 Jan 2017, 20:20

Re: ವಿವಾಹ ಸಮಾರಂಭ

Post by Sachi_R »

Summary in English.

The wedding hall is full and just before the final ritual of the wedding, the priest announces, "Hello, does anyone assembled here have any objection to this marriage? I have seen too many marriages fail due to differences and problems. Better you raise it now!" a young woman holding a baby in her arms comes forward towards the Mandapam. The startled bride gives a tight slap to the groom. Her mother faints. Her father rushes to fetch his gun. Her brothers give a proper thrashing to the groom. There is chaos.

The priest manages to find his voice and asks, "Lady, what have you come forward to say? Get done with it."

She replies, charmingly cuddling her baby, "Swami, your voice was not audible at the back. Can you repeat what you were telling everyone before?"

Post Reply